---------------------------------------------------------------------------------------------------------------------
ಬೆಂಗಳೂರು: ಕಾಮಿ ಸ್ವಾಮಿ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಬಾರದಿದ್ದರೆ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಚಾಣುಕ್ಯ ಜನಗಣ ಮನ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಎಂ. ವಾಸುದೇವರಾವ್ ಕಶ್ಯಪ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವಿಕೃತ ಕಾಮಿ ನಿತ್ಯಾನಂದನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಾಜಕ್ಕೆ ನಿತ್ಯಾನಂದನ ಕೊಡುಗೆ ಏನೂ ಇಲ್ಲ. ಆತನ ಆಶ್ರಮ ಮೋಜಿನ ಕೇಂದ್ರವಾಗಿದೆ. ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅಗ್ರಿಮೆಂಟ್ ಕೂಡ ಮಾಡಿಕೊಳ್ಳುವ ಕಾಮಿ ಸ್ವಾಮಿ ಕಾನೂನಿಂದ ತಪ್ಪಿಸಿಕೊಳ್ಳಲು ಬಿಡಬಾರದು ಎಂದರು. http://www.kannadaprabha.com/districts/bangalore/%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B3%86-%E0%B2%95%E0%B2%AA%E0%B2%BE%E0%B2%B3%E0%B2%AE%E0%B3%8B%E0%B2%95%E0%B3%8D%E0%B2%B7-%E0%B2%AA%E0%B3%8A%E0%B2%B2%E0%B3%80%E0%B2%B8%E0%B2%B0%E0%B2%BF%E0%B2%97%E0%B3%86-%E0%B2%A6%E0%B3%82%E0%B2%B0%E0%B3%81/239499.html
No comments:
Post a Comment