ಬೆಂಗಳೂರು: ನಾನು ಹಿಂದೂ ಧರ್ಮದ ಪುನರುತ್ಥಾನ. ನನ್ನ ಒಂದು ಹನಿರಕ್ತ ಭೂಮಿಗೆ ಬಿದ್ದರೆ ಲಕ್ಷಾಂತರ ನಿತ್ಯಾನಂದರು ಹುಟ್ಟಿಕೊಳ್ಳು ತ್ತಾರೆ. ಹಾಗಂತ ನಾನು ರಕ್ತ ಬೀಜಾಸುರನಲ್ಲ. ರಕ್ತ ದೇವಾ ಸುರ ಎಂದು ನಿತ್ಯಾನಂದ ತನ್ನನ್ನು ತಾನೇ ಹೊಗಳಿಕೊಂಡಿದ್ದಾನೆ.
ಇಂದು ಬಿಡದಿ ಆಶ್ರಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ನಿತ್ಯಾನಂದ ಭಕ್ತರ ಮುಂದೆ ತನ್ನನ್ನು ತಾನೇ ಹೊಗಳಿಕೊಂಡಿದ್ದಾನೆ. ನನ್ನ ವಿರುದ್ದ ಕೂಗಿ ಕೂಗಿ ಸುಸ್ತಾಗಿ ಸುಮ್ಮನಾಗಿದ್ದಾರೆ. ನನಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಮೇಲೆ ಯಾಕಿಷ್ಟು ದಾಳಿ. ಯಾರೇ ಆಗಲಿ ನನ್ನನ್ನು ಕೊಂದರೆ ನಾನು ಹುತಾತ್ಮನಾಗುತ್ತೇನೆ. ನನ್ನನ್ನು ಯಾರೂ ಬಂಧಿಸಲು ಆಗುವುದಿಲ್ಲ. ಬಂಧಿಸಿದರೆ ಅದು ಅವರಿಗೆ ತಿರುಗುಬಾಣವಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.
ನಾನು ಕೂತು ಮಾತನಾಡಿದರೆ ಸಾಕು. ಹಲವಾರು ನಿತ್ಯಾನಂದರು ಎದ್ದು ಬರುತ್ತಾರೆ. ಯಾಕಂದ್ರೆ ನಾನೊಬ್ಬ ಹಿಂದೂ ಧರ್ಮದ ಪು ನರುತ್ಥಾನ. ಕೊಲೆ ಬೆದರಿಕೆ ಹಾಕುತ್ತಿರುವ ವಿರೋಧಿಗಳು ನನ್ನ ಕೊಂದ್ರೆ ಅದು ಅವರ ದೊಡ್ಡ ತಪ್ಪಾಗುತ್ತದೆ. ಅಲ್ಲದೇ, ಕೊಲೆ ಯತ್ನ ನನ್ನ ಮೇಲೆ ಅನುಕಂಪ ಮೂಡಿಸುತ್ತದೆ. ಬೆದರಿಕೆ ಹಾಕುತ್ತಿರುವವರು ಮೂರ್ಖರೇ ಇರಬೇಕು ಎಂದು ಹೊಗಳಿಕೊಂಡಿದ್ದಾನೆ.
ಹಿಂದೂ ಧರ್ಮದ ಪ್ರತೀಕದಂತಿರುವ ಆಶ್ರಮದ ಮೇಲೆ ಬೌಧ್ದಿಕ, ಮಾದ್ಯಮಗಳ ಮತ್ತು ಅಸ್ತ್ರಗಳ ಶಕ್ತಿಗಳಿಂದ ದಾಳಿ ನಡೆಯುತ್ತಿದೆ. ಇದು ಇದೇ ಮೊದಲಲ್ಲ. 10 ಸಾವಿರ ವರ್ಷಗಳಿಂದಲೂ ನಿರಂತರ ವಾಗಿ ನಡೆದುಬರುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರಿಗೆ ನನ್ನಿಂದ ಏನು ಸಿಗಬೇಕಿತ್ತೋ ಅದು ಸಿಗಲಿಲ್ಲ. ಹೀಗಾಗಿ ಆಶ್ರಮದ ವಿರುದ್ದ ತಪ್ಪು ಸಂದೇಶ ರವಾನಿಸಲಾಗುತ್ತಿದೆ.
ಭಾರತದಲ್ಲಿ ಬಲಿಷ್ಠವಾದ ಕಾನೂನು ವ್ಯವಸ್ಥೆಯಿದೆ. ನನ್ನ ವಿರುದ್ದದ ಪ್ರಕರಣಗಳ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ನಿತ್ಯಾನಂದ ಭಕ್ತರ ಮುಂದೆ ಸ್ವಯಂ ಹೊಗಳಿಕೊಂಡಿದ್ದೇನೆ.
http://www.justkannada.in/nithyananda-rktha-deva-surananthe/
No comments:
Post a Comment