PTI
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ದೇಶಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಕಾಮಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಸಿ.ಡಿಯಲ್ಲಿ ಇರುವುದು ತಾನಲ್ಲ ಎಂದು ನಟಿ ರಂಜಿತಾ ವಾದಿಸಿರುವ ಹಿನ್ನೆಲೆಯಲ್ಲಿ ದೃಶ್ಯಾವಳಿಯನ್ನು ಪರಿಶೀಲಿಸಲು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಸಿಐಡಿ ಡಿಜಿಪಿ ಚರಣ್ ರೆಡ್ಡಿ ತಿಳಿಸಿದ್ದಾರೆ.
ತಾಂತ್ರಿಕ ಸೆಕ್ಸ್ ಹೆಸರಿನಲ್ಲಿ ಒಪ್ಪಂದ:
ನಿತ್ಯಾನಂದ ಸ್ವಾಮಿ ಮೋಕ್ಷ ಸಿಗುತ್ತದೆ ಎಂದು ನಂಬಿಸಿ ತನ್ನ ಮೇಲೆ ಬಿಡದಿ ಸೇರಿದಂತೆ ದೇಶದ ವಿವಿಧೆಡೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಆದರೆ ಮಹಿಳೆಯ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಗೌಪ್ಯವಾಗಿ ಇಡಲಾಗಿದೆ.
ಅಷ್ಟೇ ಅಲ್ಲ ಕಾಮಿ ನಿತ್ಯಾನಂದ ಆಶ್ರಮದ ಸುಮಾರು 35ಕ್ಕೂ ಅಧಿಕ ಮಹಿಳಾ ಭಕ್ತರ ಜೊತೆ ತಾಂತ್ರಿಕ ಸೆಕ್ಸ್ ಹೆಸರಿನಲ್ಲಿ ಒಪ್ಪಂದ ಮಾಡಿಕೊಂಡಿರುವುದಾಗಿಯೂ ಆಕೆ ವಿವರಿಸಿದ್ದಾಳೆ. ತಾಂತ್ರಿಕೆ ಸೆಕ್ಸ್ ಕುರಿತ ಒಪ್ಪಂದದ ಪತ್ರಗಳನ್ನೂ ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿರವುದಾಗಿ ತಿಳಿಸಿದ್ದಾರೆ.
PTI
ರಾಸಲೀಲೆ ಪ್ರಕರಣ ಕುರಿತಂತೆ ಮತ್ತೊಬ್ಬ ಮಹಿಳೆ ಸಿಐಡಿ ಅಧಿಕಾರಿಗಳಿಗೆ ವಿವರವಾಗಿ ನೀಡಿರುವ ಹೇಳಿಕೆಯನ್ನೇ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ. ಪ್ರಕರಣದಲ್ಲಿ 101 ಸಾಕ್ಷ್ಯಿಗಳ ವಿಚಾರಣೆ ನಡೆಸಲಾಗಿದೆ. ನ್ಯಾಯಾಲಯಕ್ಕೆ ಅರವತ್ತು ದಾಖಲೆ ಸಲ್ಲಿಸಿ, ಒಟ್ಟು 430 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ.
ನಿತ್ಯಾನಂದನ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಜೀವ ಬೆದರಿಕೆ, ಅತ್ಯಾಚಾರ, ವಂಚನೆ, ಒಳಸಂಚು ಸೇರಿದಂತೆ ಐದು ಸೆಕ್ಷನ್‌ಗಳಡಿಯಲ್ಲಿ ಕೇಸು ದಾಖಲಿಸಲಾಗಿದೆ. ಅಲ್ಲದೇ ನಿತ್ಯಾನಂದನ ಶಿಷ್ಯರಾದ ನಿತ್ಯ ಸಚ್ಚಿದಾನಂದ, ಮಾ.ಸಚ್ಚಿದಾನಂದ, ನಿತ್ಯ ಭಕ್ತಾನಂದ, ನಿತ್ಯ ಸದಾನಂದ ವಿರುದ್ಧವೂ ದೂರು ದಾಖಲಿಸಲಾಗಿದೆ.
ಕಾಮಿ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದ ಸಿ.ಡಿಯಲ್ಲಿ ಇರುವುದು ನಿತ್ಯಾನಂದನೇ ಎಂಬುದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಮಿಸ್ವಾಮಿ ನಟಿ ರಂಜಿತಾಳ ಜತೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ದೃಶ್ಯಾವಳಿಯಲ್ಲಿ ಇರುವುದು ತಾನಲ್ಲ ಅಂತ ರಂಜಿತಾ ಇದೀಗ ವಾದಿಸುತ್ತಿದ್ದಾಳೆ.
http://kannada.webdunia.com/newsworld/news/regional/1011/29/1101129051_1.htm
Hari OM
ReplyDeleteCan we have the same translated to english for the benefit of all?
Pranams
Venugopal