Even if you are a minority of one, the truth is the truth. Those were the golden words of Mahatma Gandhi! TRUTH is what this blog is about... truth about Nithyananda and his cult. Don't fall prey to his charming lies... before you learn more about his real intent from the ex-members of his cult. SATYAMEVA JAYATE (Let truth alone triumph!)
Breaking News
BREAKING NEWS
Nithyananda rape case trial next date: 6 Sept. 2018
Updates from Courts
UPDATES FROM COURTSSupreme Court DISMISSED ALL PETITIONS by Nithyananda and his Secretaries to Discharge them without a trial (June 2018) NITHYANANDA FOUNDATION GUILTY OF FRAUD - US COURT ORDERED RETURN OF DONATIONS 2012 17 Retaliatory/false Complaints filed so far against whistleblower Dharmananda (lenin) by Nithyananda Cult Members!!!!14 Retaliatory/false Complaints filed so far against victim Aarthi Rao by Nithyananda & his Cult Members!!!! (All of them after charge sheet against Nithyananda)4 cases filed in India against Nithyananda Dhyanapeetam for fraud:Donors of Hyderabad Ashram, Rajapalayam Ashram,Trichy ashram and Seeragapadi Ashram (near Salem) demand that fraudulently obtained donations be returnedNITHYANANDA SLEAZE CD GENUINE : CID & FSL REPORT Renowned Forensic Expert Padma Bhushan Prof. Dr. P. Chandra Sekharan states "video not morphed"Nithyananda dismissed from Madurai Adheenam (on 19th Oct 2012), Nithyananda is banned from entering Madurai Adheenam mutt |
Thursday, January 16, 2014
Subscribe to:
Post Comments (Atom)
http://kannada.yahoo.com/%E0%B2%A8-%E0%B2%A4-%E0%B2%AF-%E0%B2%AE%E0%B2%A0%E0%B2%A6-%E0%B2%B5-%E0%B2%B0-%E0%B2%A6-%E0%B2%A7-182327304.html
ReplyDeleteರಾಮನಗರ: ಬಿಡದಿ ಬಳಿ ನಿತ್ಯಾನಂದ ಧ್ಯಾನಪೀಠದಲ್ಲಿ ಕಾನೂನು ಉಲ್ಲಂ ಸಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಜಿಲ್ಲಾಡಳಿತ ಅವುಗಳನ್ನು ತೆರವುಗೊಳಿಸುವವರೆಗೂ ಅನಿರ್ದಿಷ್ಟಾವಧಿಗೆ ಅಹೋರಾತ್ರಿ ಧರಣಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕೆ.ರಮೇಶ್ ಹೇಳಿದರು.
ಬಿಡದಿ ಬಳಿಯ ನಿತ್ಯಾನಂದ ಧ್ಯಾನಪೀಠದ ಮುಂಭಾಗ ಗುರುವಾರ ಬೆಳಗ್ಗೆ ತಮ್ಮ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಧರಣಿ ಪ್ರತಿಭಟನೆ ಆರಂಭಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿತ್ಯಾನಂದ ಧ್ಯಾನಪೀಠದ ಕಾಂಪೌಂಡ್‌ನಲ್ಲಿ ಒಟ್ಟು 22.35 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಇದೆ. ಈ ಭೂಮಿ ಪೈಕಿ ಕೇವಲ 2 ಎಕರೆ ಪ್ರದೇಶ ಮಾತ್ರ ಪರಿವರ್ತನೆ ಆಗಿದೆ. ಧ್ಯಾನಪೀಠದ ಉಳಿದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಕೃಷಿಯೇತರ ಚಟುವಟಿಕೆಗೆ ಉಳಿಕೆ 20 ಎಕರೆ ಭೂಮಿ ಬಳಕೆಯಾಗುತ್ತಿದೆ. ಇದು ಕಾನೂನು ರೀತ್ಯ ಅಪರಾಧ ಎಂದು ರಮೇಶ್ ಆರೋಪಿಸಿದರು.
ಧ್ಯಾನಪೀಠದ ಒಳಗೆ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳು ನಿರ್ಮಾಣವಾಗಿವೆ. ಸ್ವಯಂ ರಾಮನಗರ ತಹಶೀಲ್ದಾರರು ಈ ಸಂಬಂಧ ನೋಟಿಸ್ ಜಾರಿ ಮಾಡಿ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಿದ್ದಾರೆ. ಆದರೆ ಸ್ವಯಂ ಘೋಷಿತ ಸ್ವಾಮಿ ನಿತ್ಯಾನಂದ ಈವರೆಗೂ ಈ ಸೂಚನೆಯನ್ನು ಪಾಲಿಸಿಯೂ ಇಲ್ಲ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲೂ ಇಲ್ಲ. ಹೀಗಾಗಿ ಧ್ಯಾನಪೀಠದಲ್ಲಿನ ಎಲ್ಲ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬುದು ಸಂಘಟನೆಯ ಆಗ್ರಹ ಎಂದು ತಿಳಿಸಿದರು.
ಭೂಪರಿವರ್ತನೆ ಆಗದಿರುವ ಹಾಗೂ ಕೃಷಿ ಭೂಮಿಯಲ್ಲಿ ಕಟ್ಟಡಗಳ ನಿರ್ಮಾಣ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95(2) ನಿಯಮವನ್ನು ಉಲ್ಲಂ ಸಿದಂತಾಗುತ್ತದೆ. ಕಲಂ 96ರಡಿಯಲ್ಲಿ ಈಗಾಗಲೇ ಕ್ರಮ ಜರುಗಿಸಬಾರದೇಕೆ ಎಂದು ರಾಮನಗರ ತಹಶೀಲ್ದಾರರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಕನ್ನಡ ನೆಲದ ಕಾನೂನನ್ನು ಗೌರವಿಸದ ನಿತ್ಯಾನಂದ ಈ ವರೆಗೂ ತಾಲೂಕು ಆಡಳಿತದ ನೋಟಿಸ್‌ಗಳಿಗೆ ಉತ್ತರ ನೀಡಿಲ್ಲ. ಈತನ ಉದ್ಧಟತನವನ್ನು ಜಿಲ್ಲಾಡಳಿತ ಪ್ರಶ್ನಿಸದಿರುವುದು ಸೋಜಿಗ ಎಂದರು.
ಭೂಮಿ ದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ: ನಿತ್ಯಾನಂದ ಧ್ಯಾನಪೀಠ ಇರುವ 22 ಎಕರೆ ಭೂಮಿಯ ಪೈಕಿ ಬಹಳಷ್ಟು ಭೂಮಿಯನ್ನು ದಾನವಾಗಿ ಪಡೆದಿರುವ ಬಗ್ಗೆ ನಿತ್ಯಾನಂದ ಘೋಷಿಸಿಕೊಂಡಿದ್ದಾನೆ. ಆದರೆ ಈ ಭೂಮಿಯ ಪೈಕಿ 4 ಎಕರೆ ಖರಾಬು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಧ್ಯಾನಪೀಠದ ಭೂಮಿಯ ದಾನ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ವಾಸಿಸುವ ರಾಜಶೇಖರ (ನಿತ್ಯಾನಂದನ ಪೂರ್ವಾಶ್ರಮದ ಹೆಸರು)ನಿಗೆ ದಾನ ಮಾಡುವ ಪ್ರಮೇಯ ಸ್ಥಳೀಯರಿಗೆ ಏನಿತ್ತು ಎಂಬ ಪ್ರಶ್ನೆಗೆ ಆತನೆ ಉತ್ತರ ನೀಡಬೇಕಾಗಿದೆ. ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ದಾನ ಪಡೆದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಸರ್ಕಾರ ಈ ಬಗ್ಗೆಯೂ ಕೂಲುಂಕುಷವಾಗಿ ತನಿಕೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಮಹಿಳೆಯರ ಶೋಷಣೆ: ನಿತ್ಯಾನಂದ ಧ್ಯಾನಪೀಠದಲ್ಲಿ ನಿಜವಾಗಿಯೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಮಠದಲ್ಲಿ ಬಹುತೇಕ 20ರ ಆಸುಪಾಸಿನ ಹರೆಯದವರು ಮಾತ್ರ ತುಂಬಿದ್ದಾರೆ. ಇಲ್ಲಿ ಹೆಣ್ಣು ಮಕ್ಕಳ ಶೋಷಣೆ ನಡೆಯುತ್ತಿದೆ ಎಂಬ ಅನುಮಾನವಿದೆ. ಸರ್ಕಾರ ತಕ್ಷಣ ಈ ಬಗ್ಗೆ ತನಿಖೆ ನಡೆಸಬೇಕು. ನಿರ್ಧಾಕ್ಷಿಣ್ಯ ಕ್ರಮಗಳನ್ನು ಜರುಗಿಸಬೇಕು. ಕನ್ನಡ ನೆಲದಲ್ಲಿ ಇಂತಹ ಕಪಟ ಸನ್ಯಾಸಿ ಇರುವವರೆಗೆ ಕರ್ನಾಟಕಕ್ಕೆ ಕಳಂಕ ತಪ್ಪಿದ್ದಲ್ಲ ಎಂದು ರಮೇಶ್ ಗುಡುಗಿದರು.
ಎಲ್ಲ ತಮಿಳುಮಯ: ಧ್ಯಾನಪೀಠ ಕನ್ನಡ ನೆಲದಲ್ಲಿದ್ದರೂ, ಕೂಡ ಇಲ್ಲಿ ನೆಲದ ಭಾಷೆಗೆ ಗೌರವವಿಲ್ಲ. ಸ್ವಯಂ ಘೋಷಿಸಿಕೊಂಡಿರುವ ನಿತ್ಯಾನಂದ ತನಗೆ ರಾಜ್ಯದ ಬಗ್ಗೆ, ಭಾಷೆಯ ಬಗ್ಗೆ ಗೌರವವಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈತ ಒಮ್ಮೆಯೂ ಕನ್ನಡದಲ್ಲಿ ಪ್ರವಚನ ನೀಡಿಲ್ಲ. ಈತನ ಪ್ರವಚನಗಳು ಏನಿದ್ದರೂ ತಮಿಳು ಮತ್ತು ಇಂಗ್ಲಿಷಿನಲ್ಲಿ. ಧ್ಯಾನಪೀಠದಲ್ಲಿ ಕನ್ನಡಿಗರಿಗೆ ಪ್ರವೇಶವನ್ನು ನಿಯಂತ್ರಿಸಲಾಗುತ್ತಿದೆ ಎಂದು ದೂರಿದರು.
ತೆರವು ಗೊಳಿಸುವವರೆಗೂ ಹೋರಾಟ: ನಿತ್ಯಾನಂದನ ವಿರುದ್ಧ ತಮ್ಮ ಸಂಘಟನೆಯ ಅಂತಿಮ ಹೋರಾಟ. ಧ್ಯಾನಪೀಠದ ಕಾಂಪೌಂಡ್‌ನಲ್ಲಿರುವ ಅಕ್ರಮ ಕಟ್ಟಡಗಳನ್ನು ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತ ತೆರವುಗೊಳಿಸುವವರೆಗೂ ತಮ್ಮ ಸಂಘಟನೆ ಅಹೋರಾತ್ರಿ ಅನಿರ್ದಿಷ್ಟಾವಧಿಗೆ ಧರಣಿ ಪ್ರತಿಭಟನೆ ನಡೆಸಲಿದೆ ಎಂದು ರಮೇಶ್ ಸ್ಪಷ್ಟಪಡಿಸಿದರು.
http://www.kannadaprabha.com/districts/bangalore/%E0%B2%A8%E0%B2%BF%E0%B2%A4%E0%B3%8D%E0%B2%AF%E0%B2%BE%E0%B2%A8%E0%B2%82%E0%B2%A6-%E0%B2%A7%E0%B3%8D%E0%B2%AF%E0%B2%BE%E0%B2%A8%E0%B2%AA%E0%B3%80%E0%B2%A0-%E0%B2%A7%E0%B3%8D%E0%B2%B5%E0%B2%82%E0%B2%B8/163981.html
ReplyDeleteನಿತ್ಯಾನಂದ ಧ್ಯಾನಪೀಠ ಧ್ವಂಸ
First Published: 17 Jan 2014 02:00:00 AM IST
ಬೆಂಗಳೂರು: ಹರಿದ್ವಾರದಲ್ಲಿ ಕನ್ನಡಿಗರಿಗೆ ಕೊಠಡಿ ನೀಡಬೇಡಿ ಎಂದು ಉದ್ಧಟತನದ ಹೇಳಿಕೆ ನೀಡಿರುವ ನಿತ್ಯಾನಂದ ಸ್ವಾಮಿಯ ಉತ್ತರಹಳ್ಳಿಯಲ್ಲಿರುವ ಧ್ಯಾನ ಪೀಠದ ಮೇಲೆ ಕನ್ನಡಪರ ಸಂಘಟನೆ 'ನವ ನಿರ್ಮಾಣ ಸೇನೆ' ಕಾರ್ಯಕರ್ತರು ದಾಳಿ ನಡೆಸಿ ಆಶ್ರಮ ಧ್ವಂಸಗೊಳಿಸಿದ್ದಾರೆ.
ಗುರುವಾರ ಸಂಜೆ ಉತ್ತರಹಳ್ಳಿ ಯಡಲಮ್ ನಗರದಲ್ಲಿರುವ ನಿತ್ಯಾನಂದ ಧ್ಯಾನಪೀಠಕ್ಕೆ ಆಗಮಿಸಿದ್ದ ನವ ನಿರ್ಮಾಣ ಸೇನೆ 20 ರಿಂದ 30 ಕಾರ್ಯಕರ್ತರು, ಆಶ್ರಮದ ಒಳಗಿದ್ದ ಒಬ್ಬ ಸನ್ಯಾಸಿಯನ್ನು ಹೊರಗೆಳೆದು ಸುತ್ತಿಗೆ, ದೊಣ್ಣೆಗಳಿಂದ ಆಶ್ರಮವನ್ನು ಧ್ವಂಸಗೊಳಿಸಿದ್ದಾರೆ. ಆಶ್ರಮದ ಕಿಟಕಿ, ಬಾಗಿಲುಗಳು, ಕಾಂಪೌಂಡ್, ಪಕ್ಕದಲ್ಲಿದ್ದ ಶೆಡ್‌ಗಳನ್ನು ಧ್ವಂಸಗೊಳಿಸಿದ್ದಾರೆ.
ಕರ್ನಾಟಕದಲ್ಲಿರಲು ಅನರ್ಹ: ದಾಳಿ ನೇತೃತ್ವ ವಹಿಸಿದ್ದ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾ ಶಂಕರ ಪಾಟೀಲ್ ಮಾತನಾಡಿ, ಹರಿದ್ವಾರದಲ್ಲಿ ಕನ್ನಡಿಗರಿಗೆ ಕೊಠಡಿ ಕೊಡಬೇಡಿ ಎಂದು ಉದ್ಧಟತನ ಮಾತನಾಡುವ ಮೂಲಕ ನಿತ್ಯಾನಂದ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ. ಇಂತಹ ವ್ಯಕ್ತಿ ಕನ್ನಡ ನಾಡಿನಲ್ಲಿ ಆಶ್ರಮ ನಡೆಸಲು, ವಾಸಿಸಲು ಅನರ್ಹ. ಹೀಗಾಗಿ ನಿತ್ಯಾನಂದ ಕನ್ನಡ ನಾಡಿಗೆ ಬರುವುದಕ್ಕೆ ಬಿಡುವುದಿಲ್ಲ. ಬೆಂಗಳೂರಿನಲ್ಲಿ ನಿತ್ಯಾನಂದ ಇನ್ನೂ ನಾಲ್ಕು ಶಾಖಾ ಆಶ್ರಮಗಳನ್ನು ಆರಂಭಿಸಿದ್ದಾನೆ. ಮುಂದಿನ ದಿನಗಳಲ್ಲಿ ಎಲ್ಲಾ ಆಶ್ರಮಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸುವುದಾಗಿ ಹೇಳಿದ್ದಾರೆ. ಯಡಲಮ್ ನಗರದಲ್ಲಿ 4 ತಿಂಗಳ ಹಿಂದೆ ನಿತ್ಯಾನಂದ ಧ್ಯಾನಪೀಠ ಆರಂಭಿಸಿದ್ದಾನೆ. ಇದು ಜನವಸತಿ ಪ್ರದೇಶದಲ್ಲಿದ್ದ ಕಾರಣ ಸ್ಥಳೀಯರು ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದರು. ಜನರ ವಿರೋಧ ಲೆಕ್ಕಿಸದೆ ನಿತ್ಯಾನಂದನ ಶಿಷ್ಯರು ಧ್ಯಾನಪೀಠ ಆರಂಭಿಸಿ, ಸತ್ಸಂಗ, ಧ್ಯಾನ, ಭಜನೆ ಕಾರ್ಯಕ್ರಮ ನಡೆಸುತ್ತಿದ್ದರು.
ಕನ್ನಡಿಗರಿಗೆ ಅವಮಾನ ಮಾಡುವ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಗುರುವಾರ ಬೆಳಗ್ಗೆ ನಮಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೇವೆ ಎಂದು ಪಾಟೀಲ್ ತಿಳಿಸಿದರು. ಹಿಂದೂ, ಕ್ರೈಸ್ತ ಧರ್ಮ ಸೇರಿದಂತೆ ಯಾವೊಂದು ಧರ್ಮವನ್ನು ಪಾಲಿಸದೆ ತನ್ನದೇ ಧರ್ಮ ಮಾಡಿಕೊಂಡು ಕನ್ನಡ ಸಂಸ್ಕೃತಿ ಹಾಳು ಮಾಡುತ್ತಾ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ನಿತ್ಯಾನಂದನ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದರು.
ಗಡಿಪಾರಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ
ರಾಮನಗರ: ಬಿಡದಿ ಬಳಿಯ ಧ್ಯಾನಪೀಠದ ಕೃಷಿ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳ ತೆರವು ಮತ್ತು ಕಪಟಿ ಸ್ವಾಮಿ ನಿತ್ಯಾನಂದ ಗಡಿಪಾರಿಗೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ. ನಿತ್ಯಾಶ್ರಮವಾಗಿರುವ ಬಿಡದಿ ಧ್ಯಾನಪೀಠದ ಎದುರು ಗುರುವಾರ ಮುಂಜಾನೆಯಿಂದಲೇ ಧರಣಿ ಪ್ರಾರಂಭಿಸಿರುವ ಪ್ರತಿಭಟನಾಕಾರರು ನಿತ್ಯಾನಂದ, ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಕೆವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಭೂ ಕಂದಾಯ ಅಧಿನಿಯಮವನ್ನು ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಸಹಿತ ಕೃಷಿಯೇತರ ಚಟುವಟಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
his bloody fake Nithyanada should be kicked and made naked in public and beaten in old chappal after his head is shaved and make him bald, never let this sex seeker swami in this country, who say he is god man Shiva,and sanyasi, he is the bloody idiot who look girls for his sexual enjoyment in the name of swami, swamis should be far from girls in hindusium, and we can see him always surrounded by young girls
ReplyDeleteSudu, Soranai, Vetkam, Maanam,........ ethu yellaam Unakku Erukkaathu Nithyananda ??
ReplyDeleteSome of you don't seem to understand what enlightenment is, or what the title of paramhansa means, spiritually, that is. Think about Yogananda, people at that level of oneness with God don't make "Human" mistakes. The ego is essentially what makes us Human, along with our Human body [in a physical sense]. This guy is a fake, manipulating genuine people who have a desire for spiritual evolution. What I want to know, is why people are still following him for? I guess it's that cultist mind thing
ReplyDelete