ಉದಯವಾಣಿ – ೧೦ ಗಂಟೆಗಳು ಹಿಂದೆ
ಧಾನ್ಯಪೀಠ ಮತ್ತು ನಿತ್ಯಾನಂದರ ಅಧಿಕೃತ ಅಂತಜಾìಲ ತಾಣ (ಡಬುÉ.ಡಬುÉ.ಡಬುÉ.ನಿತ್ಯಾನಂದ.ಓಆರ್‌ಜಿ)ದ ಬ್ಯಾನರ್‌ನಲ್ಲಿ ಸೋಮವಾರ ಹಿಂದು ಧರ್ಮದ ಸನಾತನ ಪೀಠವಾದ ಮಹಾನಿರ್ವಾಣಿ ಪೀಠದ ಮಹಾಮಂಡಲೇಶ್ವರರಾಗಿ ನೇಮಕಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅಂತಜಾìಲದಲ್ಲೇ ಲಭ್ಯವಿರುವ ಮಾಹಿತಿ ಪ್ರಕಾರ, ಮಹಾನಿರ್ವಾಣ ಪೀಠ (ಆಖರ, ಅಖಾಡ ಎಂತಲೂ ಕರೆಯಲ್ಪಡುತ್ತದೆ)ಕ್ಕೆ 44 ಮಂಡಲೇಶ್ವರರಿದ್ದು, ಉಳಿದ 43 ಮಂಡಲೇಶ್ವರರು ನಿತ್ಯಾನಂದರನ್ನು ಮಹಾಮಂಡಲೇಶ್ವರ ಎಂದು ಆಯ್ಕೆ ಮಾಡಿದ್ದಾರೆ. ಕಳೆದ ವರ್ಷ ಅಲಹಬಾದಿನಲ್ಲಿ ನಡೆದ ಮಹಾಕುಂಭ ಮೇಳದ ವೇಳೆಯೇ ನಿತ್ಯಾನಂದರಿಗೆ ಮಹಾಮಂಡಲೇಶ್ವರ ಪಟ್ಟ ಕಟ್ಟಲಾಗಿದೆ.
ಮಹಾನಿರ್ವಾಣಿ ಪೀಠ 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ಪುನರ್‌ಸ್ಥಾಪನೆಗೊಂಡಿತು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೀಠಕ್ಕೆ ಲಗತ್ತಿಸಿದಂತೆ ಸಾವಿರಾರು ದೇವಾಲಯಗಳು, ಆಶ್ರಮಗಳು ಇವೆ ಎಂದು ಹೇಳಲಾಗಿದೆ. ಮಹಾನಿರ್ವಾಣಿ ಪೀಠಕ್ಕೆ ಕಪಿಲ ಮುನಿಗಳು ಸಹ ಕಾರಣರಾಗಿದ್ದಾರೆ. ಗಂಗೆಯ ಮಡಿಲಲ್ಲಿರುವ ಮಹಾನಿರ್ವಾಣಿ ಪೀಠ ಸನಾತನ ಹಿಂದೂ ಧರ್ಮದ ಶ್ರೇಷ್ಠ ಪೀಠ ಎಂದು ಹೇಳಲಾಗಿದ್ದು, ಕಪಿಲ, ವ್ಯಾಸ ಮತ್ತು ಶಂಕರಚಾರ್ಯರ ಜೊತೆಗೆ ನಿತ್ಯಾನಂದರು ತಮ್ಮ ಫೋಟೋ ಸಹ ಲಗತ್ತಿಸಿ ಅದನ್ನು ತಮ್ಮ ಅಧಿಕೃತ ಜಾಲತಾಣದಲ್ಲಿ ಪ್ರದರ್ಶಿಸಿದ್ದಾರೆ.
ಈ ಹಿಂದೆ ನಿತ್ಯಾನಂದ, ತಮಿಳುನಾಡಿನ ಆಧೀನಂ ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡು ಕೊನೆಗೆ ಅಲ್ಲಿನವರ ವಿರೋಧದಿಂದ ಸ್ಥಾನ ತ್ಯಜಿಸಬೇಕಾಗಿ ಬಂದಿತ್ತು. ಮತ್ತೂಮ್ಮೆ ಉತ್ತರ ಕರ್ನಾಟಕದ ಲಿಂಗಾಯತ ಮಠವೊಂದನ್ನು ಖರೀದಿಸಲು ಹೋಗಿ ವ್ಯಾಪಕ ವಿರೋಧ ಎದುರಿಸಿದ್ದರು. ಈಗ ಉತ್ತರ ಭಾರತದ ಪ್ರಮುಖ ಪೀಠಕ್ಕೆ ತಾವೇ ಮುಖ್ಯಸ್ಥ ಎಂದು ಘೋಷಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ.

ಮಧುರೈನ ಆಧೀನ ಮಠ ಮತ್ತು ಕರ್ನಾಟಕದ ಮಹಾಲಿಂಗೇಶ್ವರದ ಮಠದ ಉತ್ತರಾಧಿಕಾರಿಯಾಗಲು ಭಾರೀ ಪ್ರಯತ್ನಪಟ್ಟು ಕೊನೆಗೆ ಕೈಸುಟ್ಟುಕೊಂಡ ನಿತ್ಯಾನಂದನ ಕಣ್ಣು ಇದೀಗ ಉತ್ತರ ಭಾರತದ ಮಠಗಳ ಮೇಲೆ ಬಿದ್ದಿದೆ. ಹಿಂದೂ ಧರ್ಮದ ಅತಿ ಪುರಾತನ ಪೀಠಗಳಲ್ಲೊಂದಾದ ಹರಿದ್ವಾರದ ಅಟಲ್ ಅಖಾಡದ ಉತ್ತರಾಧಿಕಾರಿಯಾಗಲು ನನಗೆ ಆಹ್ವಾನ ಬಂದಿದೆ ಉತ್ತರ ಪ್ರದೇಶದ ಹರಿದ್ವಾರದಲ್ಲಿ ನಿತ್ಯಾನಂದ ಘೋಷಣೆ ಮಾಡಿದ್ದಾನೆ.
ಅಟಲ್ ಅಖಾಡದ ಮಹಾಮಂಡಲೇಶ್ವರ ಸುಖದೇವಾನಂದಜಿ ತಮ್ಮ ಹುಟ್ಟು ಹಬ್ಬದ ಸಮಾರಂಭದಲ್ಲಿ ನನಗೆ ಈ ಆಹ್ವಾನ ನೀಡಿದ್ದಾರೆ. ನೀವು ಮಾಡಿದ ಕೆಲಸಗಳಿಂದ ನೀವೊಬ್ಬ ಅವತಾರ ಪುರುಷ ಎಂದು ಗೊತ್ತಾಗುತ್ತದೆ ಎಂದು ಮಹಾಮಂಡಲೇಶ್ವರರು ತಮ್ಮನ್ನ ಹೊಗಳಿದ್ದಾರೆ ಎಂದು ಮಾ ಆನಂದಮಯಿ ಜೊತೆ ಹರಿದ್ವಾರದಲ್ಲಿ ಬೀಡುಬಿಟ್ಟಿರುವ ನಿತ್ಯಾನಂದ ಹೇಳಿಕೊಂಡಿದ್ದಾನೆ.
ನಿತ್ಯಾನಂದನ ಈ ಘೋಷಣೆ ಹೊರಬೀಳುತ್ತಿದ್ದಂತೆ ಸ್ಥಳೀಯರು ನಿತ್ಯಾನಂದನ ಪ್ರತಿಕೃತಿ ದಹಿಸಿ ಅಟಲ್ ಅಖಾಡದ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
No comments:
Post a Comment