ರಾಮನಗರ: ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ವಿವಾದಿತ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿಚಾರಣೆಗಾಗಿ ಬುಧವಾರ ಕೋರ್ಟ್ಗೆ ಹಾಜರಾಗಿದ್ದಾರೆ.
ನಿತ್ಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣ ವಿಚಾರಣೆ ನಡೆಸುತ್ತಿರುವ ಸಿಜೆಎಂ ಕೋರ್ಟ್, ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿತ್ಯಾನಂದ ಸ್ವಾಮಿಗೆ ಸೂಚಿಸಿತ್ತು.
ಇಂದು ಐವರು ಶಿಷ್ಯರೊಂದಿಗೆ ನಿತ್ಯಾನಂದ ರಾಮನಗರ ಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಿತ್ಯಾನಂದನ ಆಶ್ರಮವಾಸಿಯಾಗಿದ್ದ ಆರತಿ ಸ್ವಾಮಿಯ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
English summary
Controversial self-proclaimed godman Nithyananda, who is an accused in rape and other cases has Attended To CJM Court In Ramanagar district today.
No comments:
Post a Comment