பெங்களூர்: பிடதி நித்யானந்தா ஆசிரமத்தில் அனுமதியின்றி பள்ளி நடத்துவதற்கு எதிராக கிரிமினல் நடவடிக்கை எடுக்க பரிசீலித்து வருவதாக கர்நாடக மாநில துவக்க கல்வித்துறை அமைச்சர் கிம்மனே ரத்னாகர் தெரிவித்தார்.கர்நாடக மாநிலம், ராம்நகர் மாவட்டம், பிடதியில் நித்யானந்தா சாமியாரின் ஆசிரமம் அமைந்துள்ளது. இங்கு அரசு அனுமதி பெறாமல் குருகுலம் என்ற பெயரில் பள்ளி நடத்தப்படுவதாக கூறப்படுகிறது.
இது குறித்து துவக்க மாநில கல்வித்துறை அமைச்சர் கவனத்திற்கு கொண்டு¢ செல்லப்பட்டதையடுத்து பொதுக் கல்வித்துறை கமிஷனர், ராம்நகர் மாவட்ட போலீஸ் எஸ்.பி ஆகியோருடன் அமைச்சர் கிம்மனே ரத்னாகர் நேற்று ஆலோசனை நடத்தினார். இதுகுறித்து அவர் நிருபர்களிடம் கூறியது:நித்யானந்தா ஆசிரமத்தில் அனுமதியின்றி பள்ளி நடத்தப்படுகிறதா என்பது குறித்து பொதுக் கல்வித்துறை ஆணையரிடமிருந்து விவரம் கேட்டேன். அனுமதி பெறாமல்தான் பள்ளி நடத்தப்படுவது தெரியவந்துள்ளது.காவல் துறை மட்டுமின்றி சமூக நலத்துறை அதிகாரிகளுடனும் ஆலோசனை நடத்திவிட்டு எந்த மாதிரி நடவடிக்கை எடுப்பது என்பது குறித்து முடிவு எடுக்கப்படும். அனுமதி இல்லாமல் பள்ளி நடத்துவோருக்கு எதிராக கிரிமினல் வழக்கு தொடரவும் சட்டத்தில் இடமுள்ளது என்று தெரிவித்தார்.
http://www.dinakaran.com/News_Detail.asp?Nid=79526
http://www.dinamalar.com/news_detail.asp?id=915798
http://www.nakkheeran.in/users/frmNews.aspx?N=116460
ತ್ಯಾನಂದ ಗುರುಕುಲ ವಿರುದ್ಧ ಮೊಕದ್ದಮೆ
First Published: 14 Feb 2014 02:00:00 AM IST
ಕ.ಪ್ರ.ವಾರ್ತೆ ಬೆಂಗಳೂರು ಫೆ. 13
ಬಿಡದಿಯಲ್ಲಿ ನಿತ್ಯಾನಂದ ನಡೆಸುತ್ತಿರುವ ಗುರುಕುಲಕ್ಕೆ ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಕಾನೂನು ಉಲ್ಲಂಘನೆಯ ಆಧಾರದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ರೀತಿಯ ತರಗತಿ ಪ್ರಾರಂಭಿಸಲು, ಆ ತರಬೇತಿಯನ್ನು ಐಷಾರಾಮಿ ಬಂಗಲೆ ಅಥವಾ ಹೋಟೆಲ್‌ನಲ್ಲಿ ನೀಡಲಾಗುತ್ತಿದ್ದರೂ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಇಲ್ಲದಿದ್ದರೆ ಅದು ಅಪರಾಧವಾಗುತ್ತದೆ. ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು. ನಿತ್ಯಾನಂದನ ಗುರುಕುಲವೂ ಯಾವುದೇ ಅನುಮತಿ ಪಡೆದಿಲ್ಲ ಎಂದು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ಬಿಡದಿಯಲ್ಲಿ ನಿತ್ಯಾನಂದ ಗುರುಕುಲ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ವಿವರ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ರಾಮನಗರದ ಎಸ್ಪಿ, ಉಪ ವಿಭಾಗಾಧಿಕಾರಿ, ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಬೆಳಗ್ಗೆ ಸಭೆ ನಡೆಸಿದ್ದೇನೆ. ಕಾನೂನು ಉಲ್ಲಂಘಿಸಿ ಅಲ್ಲಿ ಗುರುಕುಲ ನಡೆಸುತ್ತಿರುವ ಮಾಹಿತಿ ಬಂದಿದೆ. ಆದ್ದರಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ವಿವರಿಸಿದರು.
ಈ ಗುರುಕುಲದ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲಿ ಸಾಕಷ್ಟು ಮಕ್ಕಳು ಇದ್ದಾರೆ. ಅವರು ವಿದೇಶಿಯರಾಗಿದ್ದಾರೆ. ಅವರ ಹೆಸರನ್ನು ಆತ್ಮಾನಂದ, ಶಿವಾನಂದ ರೀತಿಯಲ್ಲಿ ಎಲ್ಲವೂ ಆನಂದ ಸೇರಿಸಿ ಮಾಹಿತಿ ಒದಗಿಸಿದ್ದಾರೆ. ಆದರೆ ಅವರ ಮೂಲ ಹೆಸರೇ ಬೇರೆ ಆಗಿದೆ. ಮೂಲ ಮಾಹಿತಿ ಮುಚ್ಚಿಡುವುದು ಕೂಡ ಅಪರಾಧ. ಇದು ಒಂದು ರೀತಿಯ ವಂಚನೆ. ಅದಕ್ಕೆ ಈ ಬಗ್ಗೆಯೂ ಗುರುಕುಲಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಮಕ್ಕಳ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ. ಮಕ್ಕಳ ಹಿತರಕ್ಷಣೆ ಸರ್ಕಾರದ ಕೆಲಸ. ಆದ್ದರಿಂದ ಅಗತ್ಯ ನೋಟಿಸ್ ನೀಡಿ, ಎಲ್ಲ ರೀತಿಯ ಕಾನೂನು ಪ್ರಕ್ರಿಯೆಯನ್ನೂ ಕೈಗೊಂಡು ಕ್ರಿಮಿನಲ್ ಪ್ರಕರಣದಂತೆಯೇ ಈ ಗುರುಕುಲ ವಿಷಯವನ್ನು ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಆದೇಶಿಸಲಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಕಾನೂನು ಚೌಕಟ್ಟಿನಲ್ಲಿ ನೋಟಿಸ್ ಜಾರಿ ಸೇರಿದಂತೆ ಎಲ್ಲ ರೀತಿಯ ಪ್ರಕ್ರಿಯೆಗಳನ್ನೂ ಪೂರೈಸಬೇಕಾಗುತ್ತದೆ. ಅದನ್ನೆಲ್ಲವನ್ನು ಮುಗಿಸಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
http://www.kannadaprabha.com/
http://vijaykarnataka.indiatimes.com/articleshow/30356405.cms
http://www.prajavani.net/
No comments:
Post a Comment